ಸೌದಿ ಅರೇಬಿಯಾ ಸಾಮ್ರಾಜ್ಯ ಅಥವಾ ಸೌದಿ ಅರಬ್ದೇಶ, ಅಥವಾ ಸರಳವಾಗಿ: ಸೌದಿ ಅರೇಬಿಯೆ (ಅರಬ್ಬಿ: المملكة العربية السعودية ಆಂಗ್ಲ: ) ― ಪಶ್ಚಿಮ ಏಷ್ಯೆಯ ಒಂದು ದೇಶ. ಇದು ಅರಬೀಯ ಪರ್ಯಾಯದ್ವೀಪದ ಅತಿದೊಡ್ಡ ದೇಶ. ಇದರ ವಾಯವ್ಯದಲ್ಲಿ ಜೋರ್ಡಾನ್, ಉತ್ತರ ಮತ್ತು ಈಶಾನ್ಯದಲ್ಲಿ ಇರಾಕ್, ಪೂರ್ವದಲ್ಲಿ ಕುವೈತ್, ಕತಾರ್, ಬಹ್ರೈನ್ ಮತ್ತು ಯು.ಎ.ಇ., ಆಗ್ನೇಯಕ್ಕೆ ಒಮಾನ್ ಮತ್ತು ದಕ್ಷಿಣದಲ್ಲಿ ಯಮನ್ ದೇಶಗಳಿವೆ. ಸೌದಿ ಅರೇಬಿಯಾದ ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಕೆಂಪು ಸಮುದ್ರಗಳಿವೆ. ರಾಷ್ಟ್ರದ ವಿಸ್ತೀರ್ಣ ಸುಮಾರು ೨೧.೫೦ ಲಕ್ಷ ಚ.ಕಿ.ಮೀ.ಗಳು ಮತ್ತು ಜನಸಂಖ್ಯೆ ೨.೭೫ ಕೋಟಿ. ದೇಶದ ರಾಜಧಾನಿ ರಿಯಾದ್.